
Culture & Worships
ಬಾಕುಡ ಸಮಾಜದ ಸಂಪ್ರದಾಯ ಮತ್ತು ಆಚರಣೆಗಳು
Our Holy Places
ಬಾಕುಡ ಸಮುದಾಯದ 18 ದೈವಸ್ಥಾನಗಳು
ಬಾಕುಡರ ಹುಟ್ಟು
ಬೈಲ ಬಾಕುಡನ ಹುಟ್ಟು ಪರುಶುರಾಮನ ಸಷ್ಟಿಯಿಂದಲೇ ಪ್ರಾರಂಭವಾಗಿರುತ್ತದೆ ಎಂಬುದು ಉಲ್ಲೇಖನೀಯ. ಪರಶುರಾಮನು ತನ್ನ ಹೆಸರಿನಲ್ಲಿ ಒಂದು ಪ್ರದೇಶವನ್ನು ಸೃಷ್ಟಿ ಮಾಡಬೇಕೆಂದು ನಿರ್ಣಯ ಮಾಡುತ್ತದೆ. ಅದು ತಾನು ಕ್ಷತ್ರಿಯರೊಂದಿಗೆ ಯುದ್ಧ ಮಾಡಿ ವಶಪಡಿಸಲ್ಪಟ್ಟ ಭೂಮಿಯನ್ನು ಕಶ್ಯಪನಿಗೆ ದಾನಮಾಡಿದ ನಂತರ ಹೀಗೆ ಇಂತಹ ಸಂಕಲ್ಪವೊಂದು ಮನಸ್ಸಿನಲ್ಲಿ ಮಾಡಿದಾಗ ಅವನು ಪಶ್ಚಿಮ ಘಟ್ಟದಲ್ಲಿ ನಿಂತು ಸಮುದ್ರ ರಾಜನನ್ನು ಪ್ರಾರ್ಥಿಸುತ್ತಾನೆ ರಾಜನು ಪ್ರತ್ಯಕ್ಷನಾಗಿ ಪರಶುರಾಮನಲ್ಲಿ ನಿನ್ನ ಬಿನ್ನಹವೇನೆಂದು ಕೇಳಿದಾಗ ಅವನು ತನ್ನ ಕೊಡಲಿಯನ್ನು ಎಸೆದಾಗ ಆಕೊಡಲಿಯು ಎಲ್ಲಿ ಬಿಳುತ್ತೋ ಅಲ್ಲಿಯ ತನಕ ಸಮುದ್ರ ಹಿಂದಕ್ಕೆ ಸರಿಯಬೇಕೆಂದು ಕೇಳುತ್ತಾನೆ. ರಾಮನು ಪ್ರಾಣಿ, ಪಕ್ಷಿ ಜೀವರಾಶಿಗಳನ್ನು ಸೃಷ್ಟಿಸುತ್ತಾನೆ. ಜೊತೆಗೆ ಬೇಸಾಯ ಮಾಡಿ ಸಂತೋಷದಿಂದ ಜೀವನ ಸಾಗಿಸಲು ಹೇಳಿ ಎಂದಾದರೂ ನಿಮಗೆ ಕಷ್ಟ ಬಂದಲ್ಲಿ ನನ್ನನ್ನು ಪ್ರಾರ್ಥಿಸಿ ನಾನು ಅಭಯವನ್ನು ನೀಡಿ ಅಂತರ್ಧನನಾಗುತ್ತಾನೆ. ಅಂತೆಯೇ ಜನರು ಬೇಸಯ ಮಾಡಿ ಜೀವನ ಸಾಗಿಸುತ್ತಾ ಸಂತೋಷದಿಂದ ಇರುತ್ತಾರೆ. ಅದರೂ ಮನದ ಮೂಲೆಯಲ್ಲಿ ಸಣ್ಣ ಅತೃಪ್ತಿ. ಯಾಕೆಂದ್ರೆ ಎಷ್ಟೇ ಸುಖ ಸಂಪತ್ತಿದ್ರೂ ಕಷ್ಟಗಳು ಬಂದ್ರೂ ಅದನ್ನು ನಿವೇದಿಸಲು , ಪ್ರಾರ್ಥಿಸಲು ಕುಲದೈವ ಎಂಬುದು ಇಲ್ಲವಲ್ಲಾ ಎಂಬುದಾಗಿ ಹೀಗೆ ಪರಶುರಾಮನನ್ನು ಪ್ರಾರ್ಥಿಸಿ ತಮ್ಮ ಇಚ್ಚೆಯನ್ನು ತಿಳಿಸುತ್ತಾರೆ. ಆಗ ರಾಮನು ಚಿಂತಿಸಬೇಡಿ. ಕಾಲಕೂಡಿ ಬಂದಾಗ ನಿಮ್ಮೆಲ್ಲರ ಇಚ್ಚೆಯಂತೆ ನಿಮ್ಮ ಆರಾದ್ಯ ಕುಲದೈವವಾಗಿ ಭಗವನ್ಆದಿಶೇಷನು ಭೂಮಿಗೆ ಆವತರಿಸಲಿದ್ದಾನೆ ತಾವೆಲ್ಲಾ ಭಯಭಕ್ತಿಯಿಂದ ಅವನನ್ನು ಪ್ರಾರ್ಥಿಸಬೇಕೆಂದು ಹೇಳಿ ಅಂತರ್ಧಿನನಾಗುತ್ತಾನೆ.
ಬಾಕುಡರ ಹುಟ್ಟು :-
ತುಳುನಾಡಿನ ಎರ್ಮಲ್ ಎಂಬ ಒಂದು ಹಳ್ಳಿಯಲ್ಲಿ [ಈಗಿನ ಕಾಸರಗೋಡು [ತಾಲೂಕು ] ಅಮ್ಮು ಮುದ್ಯನಾರಾಯಣ ಮತ್ತು ದೈಯಾರು ಎಂಬ ದಂಪತಿಗಳು ವಾಸವಾಗುತ್ತಾರೆ ಸಾಕಷ್ಟುಶ್ರೀಮಂತರಾಗಿದ್ದ ದಂಪತಿಗಳಿಗೆ ಜೀವನವು ಸುಖಮಯವಾಗಿತ್ತಾದರೂ ಸಂತಾನ ವಿಲ್ಲದ ಒಂದೇ ಚಿಂತೆಯಿಂದ ಕೊರಗುತ್ತಿದ್ದರು. ಅವರ ಮೊರೆಯನ್ನು ದೇವರು ಆಲಿಸಿದರೋ ಎಂಬಂತೆ, ಆ ತಿಂಗಳಲ್ಲಿ ದೈಯಾರುವಿಗೆ ಸೂತಕವಾಗಿ ಮನೆಯಿಂದ ಹೊರಗಿರುತ್ತಾಳೆ. ಆಮೇಲೆ ಸ್ನಾನಕ್ಕೆ ಹೊರಟಳು ಜೊತೆಗೆ ಸ್ನಾನಕ್ಕೆ ಬೇಕಾದ ಕೆಂಪೊಡು ಇತ್ಯಾದಿಗಳನ್ನು, ಹೆಂಗಸರ ಕೈಯಲ್ಲಿ ಕೊಟ್ಟು, ತಾನು ಎಡಗೈಯಲ್ಲಿ ಮೈಲಿಗೆ ವಸ್ತ್ರಗಳನ್ನು ಬಲಗೈಯಲ್ಲಿ ಕುಕ್ಕಿನ [ಮಾವು] ಕುಡಿ, ತಂಬಿಲ ಪಣಿ ಚತ್ರ [ಹಿಂದಿನ ಕಾಲದ ಓಲೆಗರಿಯ
ಕೊಡೆ] ವನ್ನು ಹಿಡಿದುಕೊಂಡು ಮುಂದಿನಿಂದ ಸಂಗೀತ, ಹಿಂದಿನಿಂದ ಸೇವಕಿಯರೊಂದಿಗೆ ಮಡಿವಾಳ ಕೆರೆಗೆ ಬಂದಳು ಸ್ನಾನಕ್ಕಾಗಿ ಕೆರೆಗಿಳಿದು 3 ಬಾರಿ ಮುಳುಗಿ ಎದ್ದಾಗ, ಅದೇ ಕೆರೆಯಲ್ಲಿ ಸ್ನಾನ ಮಾಡುತ್ತಿದ್ದ ನಾಗಕನ್ನಿಕೆಯರು ಕುಪಿತರಾಗಿ ನಾವು ಸ್ನಾನ ಮಾಡುತ್ತಿದ್ದಾಗ ಸೂತಕವಾದ ನೀನು ನಮ್ಮನ್ನು ಅಶುದ್ಧಗೊಳಿಸಿದ ಇದರಿಂದಾಗಿ ನಿನ್ನ ಹೊಟ್ಟೆಯಲ್ಲಿ ಉರಗಾದಿಗಳು ಜನಿಸಲಿ ಎಂದು ಶಾಪವಿತ್ತರು. ಬರಸಿಡಿಲಿನಂತೆ ಕಿವಿಗಡರಿದ ಶಾಪವನ್ನು ಕೇಳಿ ದೈಯ್ಯಾರು ಕಂಗಾಲಾದಳು ಇದನ್ನು ಕಂಡ ಸೇವಕಿಯರು ಹಾಗೂ ಮಡಿವಾಳ ಹೆಂಗಸರೆಲ್ಲಾ ಸೇರಿ ಶಾಪವನ್ನು ಹಿಂದೆಗೆದು ಕೊಳ್ಳಬೇಕೆಂದು ಬೇಡಿಕೊಂಡರು ನಾಗ ಕನ್ನಿಕೆಯರಿಗೆ ಕರುಣೆ ಬಂದು ಕೊಟ್ಟ ಶಾಪವನ್ನು ಹಿಂದಕ್ಕೆ ಪಡೆಯಲು ಸಾಧ್ಯವಿಲ್ಲ ಆದರೆ ನೀನು ಗರ್ಭಿಣಿಯಾಗಿ ೯ ತಿಂಗಳು ಕಳೆದು 9ನೇ ದಿನದಂದು ನಿನಗೆ 10 ಸಲ ನೋವು ಬರುವುದು, 8 ನೋವುಗಳಲ್ಲಿ ಉರಗಾದಿಗಳು 9ನೇ ನೋವಿನಲ್ಲಿ 1 ಗಂಡು 10ನೇ ನೋವಿನಲ್ಲಿ 1 ಹೆಣ್ಣು ಜನಿಸುವರು, ಮುಂದೆ ಅವರಿಬ್ಬರು ಮಹಾಶಕ್ತಿಗಳಾಗಿ ಪ್ರಭಾವ ಬೀರಲಿರುವರು ಎಂದು ಹೇಳಿ ಅಂತರ್ಧಾನರಾಗುವರು. ದೈಯಾರು ತನ್ನ ಮನದಲ್ಲಿ ನಾಗಕನ್ನಿಕೆಯರು ತನಗಿತ್ತ ಶಾಪವು ದಿಟವಾಗುವುದೆ ಎಂದು ಚಿಂತಿಸಲು ? ದಿಟವೇ ಅದರೆ ಇಬ್ಬರು ಮಕ್ಕಳ ತಾಯಿಯಾಗುವೆನೆಂದು ಸಂತಸಗೊಂಡಳಾದ ಮರುಕ್ಷಣವೇ ಅವಳು ಶಾಪದ ನುಡಿಯಂತೆ ಉರಗಾದಿಗಳನ್ನು ಪ್ರಸವಿಸಲಿರುವೆನೆಂವುದನ್ನು ನೆನೆದು ಕುಗ್ಗಿದಳು. ತನಗೂ ತನ್ನ ಮನೆಗೂ ಶಾಪವನ್ನು ತಂದೊಡ್ಡಿದೆನೆಲ್ಲಾ ಎಂದು ಚಿಂತಿಸಿ ಶಾಪ ಪರಿಹಾರಕ್ಕಾಗಿ ಬೆಳ್ಳಿಗೆ ಅಕ್ಕಿ, ಸೀಯಾಳ, 5ವೀಳ್ಯದೆಲೆ ಮತ್ತು 1 ಅಡಿಕೆಯನ್ನು ಇಟ್ಟು ಭಕ್ತಿಯಿಂದ ಕೈ ಮುಗಿದು ದೇವಸ್ವರೂಪಿಯರಾದ ನಾಗಕನ್ನಿಕೆಯರೇ ನನಗಿತ್ರ ಶಾಪಕ್ಕೆ ವಿಮೋಚನೆಯನ್ನು ಕರುಣಿಸಿ ಎಂದು ಬೇಡಿದಳು. ಆನಂತರ ಮಡಿವಾಳ ಹೆಂಗಸರಿಗೆ ಬಿಳಿಯ(ಬಟ್ಟೆ) ವನ್ನು ಕೊಟ್ಟು ತನ್ನ ಮನೆಗೆ ಸೇವಕಿಯರೊಡಗೂಡಿ ಬಂದಳು.ಮನೆಗೆ ಬಂದು ಶುಭ್ರ ವಸ್ತ್ರಗಳನ್ನುಟ್ಟು ಭಕ್ಷ್ಯ ಬೋಜನ ಮಾಡಿ ತೆಂಕು ದಿಕ್ಕಿನ ಕೋಣೆಯಲ್ಲಿ ಅಂದು ರಾತ್ರಿ ಜಾಗರಣೆ ಇದ್ದು ಮೂಡಣ ದಿಕ್ಕಿನಲ್ಲಿ ಉದಯಿಸುವ ನಕ್ಷತ್ರವನ್ನು ನೋಡಬೇಕು. ಪಡುವಣ ದಿಕ್ಕಿನಲ್ಲಿ ಅಸ್ತಮಿಸುವ ನಕ್ಷತ್ರವನ್ನು ನೋಡಬೇಕು. ಅದಕ್ಕೆ ಹಾಗೇಯೇ ತನ್ನ ಪತಿ ಅಮ್ಮು ಮುದ್ರ ನಾರಾಯಣ ಅವರ ಕಾಲು ಹಿಡಿದು ಆರ್ಶೀವಾದ ಪಡೆದು ರಾತ್ರಿ ಇಡೀ ಜಾಗರಣೆ ಮಾಡುತ್ತಾಳೆ. ಬೆಳ್ಳಿಗೆ ಸೂರ್ಯೋದಯದ ನಂತರ 3 ದಿನದ ಉಪವಾಸವನ್ನು ಹಿಡಿಯುತ್ತಾಳೆ. ದೈಯಾರು ಮುಂದೆ ಸೂತಕವಾಗದೆ ತಿಂಗಳು ಕಳೆದು ೭ ನೇ ತಿಂಗಳಲ್ಲಿ ಬಹಳ ವಿಜೃಂಭಣೆಯಿಂದ ಸೀಮಂತ ಮಾಡಿದರು. ಗರ್ಭವತಿ ದೈಯಾರುವಿಗೆ 9 ತಿಂಗಳು ಕಳೆದು 9ನೇ ದಿನದಂದು ನೋವು ಬರುವುದನ್ನು ಕಂಡು ಬಲ್ಯದಿಯನ್ನು ಕರೆಸಿ ಊರಿನ ಕಲ್ಲು ಹಾಕಿ ಬೆಳ್ಳಿಯ ಅತ್ತರ್ (ತಟ್ಟೆ) ನ್ನು ತಂದು ಬಚ್ಚಲು ಮನೆಗೆ ಬೇಕಾದ ಸಿದ್ಧತೆಯನ್ನು ಮಾಡಿದರು. ದೈಯಾರುವಿಗೆ ಹೆರಿಗೆ ನೋವು ಬರುತ್ತದೆ.
1ನೇ ನೋವು 1 ಮಾಲೆ ಮೊಟ್ಟೆ(ತೆತ್ತಿ)-ಓಂತಿ
2ನೇ ನೋವು 2 ಮಾಲೆ ಮೊಟ್ಟೆ-ಪಲ್ಲಿ
3ನೇ ನೋವು 3 ಮಾಲೆ ಮೊಟ್ಟೆ-ಅರಣೆ
4ನೇ ನೋವು 4 ಮಾಲೆ ಮೊಟ್ಟೆ-ಕೇರೆ ಹಾವು
5ನೇ ನೋವು 5 ಮಾಲೆ ಮೊಟ್ಟೆ-ಮಂಡಲಿ ಹಾವು
6ನೇ ನೋವು 6 ಮಾಲೆ ಮೊಟ್ಟೆ-ಕನ್ನಡಿ ಹಾವು
7ನೇನೋವು7 ಮಾಲೆ ಮೊಟ್ಟೆ-ಕರಿಯ ಕಾಳಿಂಗ ಸರ್ಪ(ಸಂಕಮಾಲೆ)
8ನೇ ನೋವು 8 ಮಾಲೆ ಮೊಟ್ಟೆ-ಬಿಳಿ ಸಂಕಮಾಲೆ
9ನೇ ನೋವಿಗೆ (9ತಿಂಗಳು, 9ದಿನ, 9ಗಂಟೆ,೯ ನಿಮಿಷ,9ಸೆಕೆಂಡು, 9ಗಳಿಗೆ8ನೇಜಾಮಕೆ ನಾಗರಹಾವು(ಒಳ್ಳೆಯ ನಾಗ ಗಾಳಿ ಮತ್ತು ಬಿಸಿಲು ಸೇವಿಸುವ ನಾಗ)ಜನನ ವಾಗುತ್ತಿರುವಂತೆ 1ಹೆಣ್ಣು ಮತ್ತು 1ಗಂಡು ಮಗು ಜನಿಸುತ್ತದೆ. ಈ ವಿಷಯವನ್ನು ತಿಳಿದು ಊರಿಗೆ ಊರೇ ದಿಗಿಲುಗೊಂಡಿತು. ಪ್ರಸವ ಕಳೆದ 41ನೇ ರಾತ್ರಿ ದೈಯ್ಯಾರುವಿಗೆ ಕನಸಲ್ಲಿಮಾರುವುದಿಲ್ಲ ಎಂಬ ನಿರ್ಧಾರ ಕೈಗೊಂಡು ಚಾಪೆಯನ್ನು ಗೋಳಿಮರಕ್ಕೆ ನೇತುಹಾಕಿ ಗೋಳಿಮರದ ಗೆಲ್ಲನ್ನು ತಂದು ಅಡ್ಕ ಬಾಕಿಮಾರು ಗದ್ದೆಯಲ್ಲಿ ನೆಟ್ಟು ಉರ್ಮಿಯಕಟ್ಟಕ್ಕೆ ಬಂದು ನೀರಲ್ಲಿ ಮೂರು ಬಾರಿ ಮುಳುಗಿ ಎದ್ದು ಬಾಕಿಮಾರು ಗದ್ದೆಗೆ ಬಂದು ಪ್ರದಕ್ಷಿಣೆಗೈದು ಪೂರ್ವ ದಿಕ್ಕಿಗೆ ಮುಖ ಮಾಡಿ ಕೊಡಿಂಚಿರಿನಲ್ಲಿ ನಾಗರಾಜನು ಇದ್ದರೆ, ಎರ್ಮಲ್‌ನಲ್ಲಿ ಬೆರ್ಮೆರ್ ಈ ಭೂಮಿಯಲ್ಲಿ ಶಾಶ್ವತವಾಗಿ ಇದ್ದರೆ, ನನಗೆ ಅವಮಾನ ಮಾಡಿದ ಬೀಡುಗಳೆಲ್ಲ ನೆಲಸಮವಾಗಿ ಅವರ ಸಂತಾನವೆಲ್ಲ ನಾಶವಾಗಲಿ ಎಂದು ಶಾಪಕೊಟ್ಟು ,ನಾನು ಸತ್ಯದಲ್ಲಿ ಹುಟ್ಟಿದ ಮಗಳಾಗಿದ್ದಲ್ಲಿ ನಾಗಬ್ರಹ್ಮರ ಬಲಭಾಗದಲ್ಲಿ ನೆಲೆ ನಿಲ್ಲುವಂತಾಗಲಿ, ಎಂದು ಹೇಳಿಮಾಯವಾದಳು ಎಂದು ಪಾಡ್ಡನಗಳಲ್ಲಿ ಹೇಳಲಾಗುತ್ತಿದೆ. ಹಾಗೂ ಆಕೆಯ ಶಾಪದ ಫಲದಂತೆ ಜೈನಸಂತತಿಗಳು ನಾಶವಾಗಿ ಹೋದವು. ಅವರ ಜಮೀನುಗಳಲ್ಲಿ ಬ್ರಾಹ್ಮಣ
ಹಾಗೂ ಬಂಟ ಸಮುದಾಯದವರು ಕೃಷಿಮಾಡಿ ಜೀವಿಸುತ್ತಿದ್ದಾರೆ. ಈಗ ಒಂದೇ ಒಂದು ಜೈನ ಸಂತತಿ ಈ ಊರಲ್ಲಿ ಇಲ್ಲವಾಗಿದೆ. ಈಗಲೂ ನಾಗಾರಾಧನೆಯಲ್ಲಿ ಹೇಳುವ ರೀತಿ ಹಾಗಿರುತ್ತದೆ. ಕೊಡೆಂಕೀರು ಉದಯ, ಅಡ್ಕಕಂತು, ಉದ್ಯಾವರ ನಾಲ್ಕುಕಾಲು, ಬಡಾಜೆ ನಾಲ್ಕುಗುಳಿ ಎಂಬ ಮಾತು, ಅಂದಿನಿಂದಲೂ ಬಾಕುಡ ಸಮಾಜದವರು ಶ್ರೀ ನಾಗಾರಾಧನೆ ನೇಮ ರೂಪದಲ್ಲಿ ಪ್ರತಿ 2 ವರ್ಷಕ್ಕೊಮ್ಮೆ ನಾಗಬ್ರಹ್ಮರ ಸೇವೆಯನ್ನು ಬಹಳ ಶ್ರದ್ಧೆಯಿಂದ ಆರಾಧಿಸಿ ಬರುತ್ತಿದ್ದಾರೆ. ಮುಂದೆ ದ್ರಾವಿಡರೆಂದು ಕರೆಯಲ್ಪಡುವ ಬಾಕುಡರು ನಾಗದೇವರನ್ನು, ಬೆರ್ಮೆರನ್ನು, ಉಳ್ಳಾಲ್ಲಿ (ದೈಯಾರು) ಹಾಗೂ ಸಣ್ಣ ಅಕ್ಕ ಎಂದು ಕರೆಯಲ್ಪಡುವ ಪಳ್ಳಿ ತೋಕೂರು ಬಾಕುಡ್ಡಿಯನ್ನು ದೈವರೂಪದಲ್ಲಿ ನೇಮಕಟ್ಟಿಸಿ ಪೂಜಿಸುತ್ತಾ ಬರುತ್ತಿದ್ದಾರೆ
ನೇಹ ಬೇಕೂರು D/o ಸಂತೋಷ್
(ದಿ| ರಾಮರವರ ಸಂಗ್ರಹದಿಂದ ಆಯ್ದ ಭಾಗ)