top of page

ಶ್ರೀ ನಾಗಬೆರ್ಮೆರ್ ಮರ್ಲ್ ಧೂಮಾವತಿ
ದೈವಸ್ಥಾನ, ಬಡಾಜೆ

'ದೊಡ್ಡ ಕಿಂಜಂದಿನ ಕುಟುಂಬದ ದೈವಸ್ಥಾನವಾಗಿರುವ ಕ್ಷೇತ್ರವು ಮಂಜೇಶ್ವರದಿಂದ ಗೋವಿಂದ ಪೈ ಕಾಲೇಜಿಗೆ ಹೋಗುವ ದಾರಿಯಲ್ಲಿ ಮುಂದೆ ಬಂದು ಪೂರ್ವಕ್ಕೆ ಸಾಗಿದರೆ ಬಡಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಹಾಗೂ ಬಡಾಜೆ ಸರಕಾರಿ ಶಾಲೆಯ ಸಮೀಪವಿರುವ ಪುಣ್ಯ ಸ್ಥಳದಲ್ಲಿ ಇದೆ. ಇದರ ಸಮೀಪವಿರುವ 'ಬನ'ದಲ್ಲಿ ನಾಗ ಸೇವೆಯು ನಡೆಯುವುದು ಇದು 3 ಕುಟುಂಬದವರಾದ ಬಡಾಜೆ, ಬಳ್ಳಕ್ಕೂರು ಹಾಗೂ ಬಜಲೇರಿಯ ದೈವಸ್ಥಾನದ ಕುಟುಂಬಸ್ಥರು ನಾಗಾರಾಧನೆಯನ್ನು ಮಾಡಿಕೊಂಡು ಬರುತ್ತಿದ್ದಾರೆ. ವರ್ಷಕ್ಕೊಮ್ಮೆ ಬೇರೆ ಬೇರೆ ಕುಟುಂಬಸ್ಥರ ನಾಗಬ್ರಹ್ಮರ ಸೇವೆಯು ನಡೆಯುತ್ತದೆ.

bottom of page