top of page

ಶ್ರೀ ಕೋಮರಾಯ ವ್ಯಾಘ್ರ ಚಾಮುಂಡೇಶ್ವರಿ
ದೈವಸ್ಥಾನ, ಬಜಿಲೇರಿಯ

ತುಳುನಾಡಿನ ಮಣ್ಣಿಗೆ ಅದರದ್ದೇ ಆದ ವೈಶಿಷ್ಟ್ಯವಿದೆ. ಜಾನಪದ ಸಂಸ್ಕೃತಿಯ ಸೊಹಸಿದೆ. ಬಡಗು ದಿಕ್ಕು ಬಾರ್ಕೂರಿನಿಂದ ತೆಂಕುದಿಕ್ಕು ನಿಲೇಶ್ವರದವರೆಗೆ ತೌಳವ ಸಂಸ್ಕೃತಿಯ ಕಂಪು ಪಸರಿಸಿದೆ. ತುಳು ನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದರ ಜೊತೆಗೆ ದೈವ ದೇವರುಗಳ ಆರಾಧನೆಯೂ ಕೂಡಾ ಸಾಂಗವಾಗಿ ನೇರವೇರುತ್ತದೆ. ಬಾಕಡ ಸಮುದಾಯದ ಅಧೀನಕ್ಕೊಳಪಟ್ಟಹದಿನೆಂಟು ದೈವಸ್ಥಾನಗಳಲ್ಲಿ ಒಂದಾದ ಶ್ರೀ ಕೋಮರಾಯ ವ್ಯಾಘ್ರ ಚಾಮುಂಡೇಶ್ವರಿ ದೈವಸ್ಥಾನ ಬಜಿಲೇರಿಯ ಆದರ್ಶನಗರ ಮಂಜೇಶ್ವರ ಇದರ ಕಿರು ಪರಿಚಯವನ್ನು ತಿಳಿಸಲು ಸಂತೋಷಪಡುತ್ತೇವೆ. ಕ್ಷೇತ್ರ ಹಿನ್ನಲೆ ಹದಿನೆಂಟು ದೈವಸ್ಥಾನಗಳಲ್ಲಿ ವರ್ಷಂಪ್ರತಿ ನೇಮೋತ್ಸವ ಜರಗುವಂತೆ ರಾಷ್ಟ್ರೀಯ ಹೆದ್ದಾರಿ 17 ಹಾದು ಹೋಗುವ (ಹಿಂದಿನ ಕಾಲದ ಹೊಕ್ಕಿಮಲೆ ಎಂಬ ನಾಮಾಂಕಿತ ಸ್ಥಳ) “ಹೊಸಬೆಟ್ಟಿನ ಪಡ್ಡು ಎಂಬ ಸ್ಥಳದಲ್ಲಿ ಶ್ರೀ ಕೋಮರಾಯ ವ್ಯಾಘ್ರ ಚಾಮುಂಡೇಶ್ವರಿ ದೈವ ಹಾಗೂ ಇತರ ಪರಿವಾರ
ದೈವಗಳ ನೇಮೋತ್ಸವವನ್ನು 'ಕಂಚಾರ್ದನ" ಕುಟುಂಬದ ಕುಟುಂಬಸ್ಥರು ಹಾಗೂ ದೈವದ ಪಾತ್ರಿಗಳು ಆಚರಿಸಿಕೊಂಡು ಬರುತ್ತಿದ್ದರು ಎಂಬುವುದು ನಿರ್ವಿವಾದ. ಮಾತ್ರವಲ್ಲ ನೇಮೋತ್ಸವವು ಪಡ್ಡು ಎಂಬಲ್ಲಿ ಜರಗುತಿತ್ತು ಎಂಬುವುದಾಗಿ ರಾಮ ಮಂಜೇಶ್ವರ ಮಂಟಾಡಿ ಬಾಬು ಹೊಸಬೆಟ್ಟು ಭಾಗಿ,
ಬಾಬು ಬೆದ್ರಡ್ಕ, ಬಾಬು ಕಲ್ಲಟೆ ಹೊಸಬೆಟ್ಟು ಲಕ್ಷ್ಮಿ ಸಂಜೀವ ಕಜೆ ಕೋಡಿ (ದೈವದ ಪಾತ್ರಿ ಉದ್ಯಾವರ) ಹಾಗೂ ಇತರ ಸಮುದಾಯದವರು ತಮ್ಮ ಹೇಳಿಕೆಯನ್ನು ಖಾತರಿಪಡಿಸುತ್ತಾರೆ ಎಂಬುವುದರಲ್ಲಿ ಎರಡು ಮಾತಿಲ್ಲ.ಹಿಂದಿನ ತಲೆಮಾರಿನ ಹಿರಿಯರಾದ ಮಂಟಾಡಿ ಕುಟ್ಟಿ ಕೋಮಾರು ಪೇರೂರಿನ ಕೊರಗ, ಅರಿಬೈಲು ಕುಟ್ಟಿ ಭೋಜ ಕಾವೂರು, ಇವರ ನೇತೃತ್ವದಲ್ಲಿ ಪಡ್ಡು ಎನ್ನುವ ಸ್ಥಳದಲ್ಲಿತೋಮ ಎಂಬ ಹೆಸರಿನ ನಲಿಕೆ ಸಮುದಾಯದವರ ಸಹಯೋಗದೊಂದಿಗೆ ಅಚ್ಚನಿ (ಭಂಡಾರ ಇಡುವ ಮಾತ್ರವಲ್ಲ 1974ರವರೆಗೆ ಮುಂದುವರಿಯಿತು. ಬಾಕುಡ ಸಮುದಾಯದ ಕಟ್ಟುಪಾಡಿನ ಪ್ರಕಾರ ಸಂಕ್ರಮಣ ಸೇರಿ ಎಂಟನೇ ದಿನಕ್ಕೆ ಭೂತದ ನೇಮೋತ್ಸವ ಎರಡು ವರ್ಷವೂ ಒಂದು ವರ್ಷ ನಾಗಬ್ರಹ್ಮರ ಉತ್ಸವವು ನಡೆಸಲಾಗುತ್ತಿತ್ತು. (ಸಂಕ್ರಮಣ ಸೇರಿ 5ನೇ ದಿನಕ್ಕೆ) ಈ ರೀತಿ ನಡೆದು ಕೊಂಡು ಬರುತ್ತಿದ್ದ ಉತ್ಸವವು ಕೆಲವು ತಾಂತ್ರಿಕ ಕಾರಣಗಳಿಂದ 1974ರ ನಂತರ ಸ್ಥಗಿತಗೊಂಡಿತು. ತದನಂತರ ಹೊಸಬೆಟ್ಟು ಪಳ್ಳ (ಈಗಿನ ಗೋವಿಂದ ಪೈ ಕಾಲೇಜು ಸಮೀಪ) ಎಂಬಲ್ಲಿ ನಮ್ಮಿ ಕುಟುಂಬದ ಭೋಜ ಕಾವೂರು ನೀಡಿದ ಸ್ಥಳದಲ್ಲಿ ಶಿಲಾನ್ಯಾಸ (ಕೆಸರುಕಲ್ಲು) ಕಾರ್ಯವನ್ನು ನಾಲ್ವರು ಹಿರಿಯರ ಸಮ್ಮುಖದಲ್ಲಿ ಹಮ್ಮಿಕೊಂಡು ದೈವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಆದರೆ ಆರ್ಥಿಕ ಕೊರತೆಯಿಂದಾಗಿ ಕಾಮಗಾರಿ ಮೊಟಕುಗೊಂಡಿತು. ಇದರ ಪರಿಣಾಮ ಜೀರ್ಣೋದ್ಧಾರ ನಡಸಲು ಅಡಚಣೆಯುಂಟಾಯಿತು. ಕೆಲವು ವರ್ಷಗಳ ಕಾಲ ನೇಮೋತ್ಸವ ಸ್ಥಗಿತಗೊಂಡಾಗ ಕುಟುಂಬಸ್ಥರೂ, ದೈವದ ಪಾತ್ರಿಗಳೂ ಹಾಗೂ ಉತ್ಸಾಹಿ ಯುವಕರು ಮುತುವರ್ಜೀ ವಹಿಸಿ ಕುಟುಂಬಸ್ಥರಾದ ರಾಮ ಆದರ್ಶನಗರ ಇವರಿಂದ 15 ಸೆಮಟ್ ಸ್ಥಳವನ್ನು ಖರೀದಿಸಿ ಅಚ್ಚನಿ ಕಟ್ಟಿಕೊಂಡು ನೇಮೋತ್ಸವ ನಡೆಸಲಾಯಿತು. ಈ ಸಂದರ್ಭದಲ್ಲಿ ಕೆ.ಪಿ. ಕೊರಗ ವಯನಾಡು ಕಾರ್ಯ1. (ಪೇರೂರ್ ಪಾಲ್ )
2. ಸುಕುಮಾರ ಹೊಸಬೆಟ್ಟು (ಮಂಟಾಡಿಪಾಲ್)
3. ಬಾಬು ಬೆದ್ರಡ್ಕ ( ಮಜ್ಜರ್ ಪಾಲ್ )
4. ಶೇಖರ ಹೊಸಂಗಡಿ (ಅರಿಬೈಲು ಪಾಲ್)
5. ಬಾಬು ಕಲ್ಲಟೆ (ಕೋಮರಾಯ ಪಾತ್ರಿ)
ಹಾಗೂ ಅರಿಬೈಲ್ ಕುಟ್ಟಿ, ಮಂಟಾಡಿ ಕೋಮಾರು, ಭೋಜಕಾವೂರು ಮತ್ತು ಕುಟುಂಬಸ್ಥರ ಸಹಕಾರ
ದಿಂದಜ್ಯೋತಿಷೆಯ ಮೂಲಕ “ತಾಂಬೂಲಪ್ರಶ್ನೆ” ಯನ್ನಿಡಲಾಯಿತು. ಅದರಲ್ಲಿ ತಿಳಿದ ಪ್ರಕಾರ
ಹೊಸಬೆಟ್ಟು”ಪಡ್ಡು"ಎಂಬಲ್ಲಿಂದ (ಹೊಕ್ಕಿಮಲೆ) ಮೃತ್ತಿಕೆ (ಮಣ್ಣು) ಯನ್ನು ಬಡಾಜೆ ಬೂಡು ಶ್ರೀ
ಗೋಪಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ , ಪೋಸೋಟು ಆದರ್ಶನಗರ ಎಂಬ ಪುಣ್ಯ ನೆಲದಲ್ಲಿ ಸ್ಥಳ ಶುದ್ದೀಕರಣನಡೆಸಿ, ಪ್ರೋಕ್ಷಣೆ ಮಾಡಲಾಯಿತು ಬಳಿಕ ದೈವಸ್ಥಾನದ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು. ಮಾತ್ರವಲ್ಲ ದೈವಸ್ಥಾನದ ಕೆಲಸ ಕಾರ್ಯಗಳು ಸಾಂಗವಾಗಿನಡೆಯಲು ಕೇಶವಅತ್ತಾವರ, ಹರೀಶ್ ಶೆಟ್ಟಿ ಮಾಡ, ಸಂಜೀವ ಶೆಟ್ಟಿ ಹಾಗೂ ಕುಟುಂಬದ ಯುವಕರನ್ನು, ಬೀಗರನ್ನು (ಮೊದುವೆರ್) ಸೇರಿಸಿ “ಬ್ರಹ್ಮ ಕಲಶೋತ್ಸವ ಸಮಿತಿಯನ್ನು ರೂಪೀಕರಿಸಲಾಯಿತು. ಕುಟುಂಬಸ್ಥರು ಹಾಗೂ ಊರ-ಪರವೂರ ಭಕ್ತಾದಿಗಳು ನೀಡಿದ ಧನಸಹಾಯ, ಹಸಿರು ವಾಣಿಯ ಸಹಕಾರದಿಂದ ಜೀರ್ಣೋದ್ಧಾರ ಕಾರವು ಪುರೋಗತಿಯನ್ನು ಪಡೆದು ತಾರೀಕು 23/5/2010 ರಂದು ಸಕುಟುಂಬಿಕರು ಇದ್ದು ಬಡಾಜೆ ಬೂಡು ಶ್ರೀ ಗೋಪಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ
ಸ್ಥಳ ಶುದ್ದೀಕರಣ,ಗಣಹೋಮ, ಬ್ರಹ್ಮಕಲಶೋತ್ಸವವನ್ನು ಸಾಂಗವಾಗಿ ನಡೆಸಿ, ದೈವಸ್ಥಾನ ಪ್ರವೇಶ ಮಾಡಲಾಯಿತು. ಅಂದಿನಿಂದ ಪ್ರತೀ ಎರಡುವರ್ಷ ದೈವದ ನೇವೋತ್ಸವವು ಒಂದು ವರ್ಷ (ಸಂಕ್ರಮಣ ಸೇರಿ 5ಕ್ಕೆ) “ನಾಗಬ್ರಹ್ಮರ” ಉತ್ಸವವು ಆಚರಿಸಿಕೊಂಡು ಬರಲಾಗುತ್ತದೆ.ಈ ರೀತಿಯ ಆಚರಣೆಗೆ ಸಾಂಪ್ರಾದಾಯಿಕ ಹಿನ್ನಲೆಯಿದೆ. ಅದೇನೆಂದರೆ ಕೊಡಿಂಚೀರ್ ಉದಿಪು-ಅಡ್ಕ ಕಂತ್-ಬಡಾಜೆ ನಲ್ಕುರಿ – ಉದ್ದಾರಕಾರ್‌ ಇದರ ಪ್ರಕಾರ ಸಂಕ್ರಮಣ ಸೇರಿ 8ನೇದಿನಕ್ಕೆ ದೈವಗಳ ನೇಮೋತ್ಸವ ಅನಾದಿಕಾಲದಿಂದ ನಡೆಸಿಕೊಂಡು ಬರಲಾಗುತ್ತಿತ್ತು ಎಂದು ಪೂರ್ವಿಕರು ಹೇಳುತ್ತಿದ್ದರು .ಈ ಹೇಳಿಕೆಯನ್ನು ಗೌರವಯುತವಾಗಿ ಸ್ವೀಕರಿಸಿ ಹಿಂದಿನ ಕಾಲದ ಸಂಪ್ರದಾಯಕ್ಕೆ ಯಾವುದೇ ಚ್ಯುತಿ ಬರದಂತೆ ಕುಟುಂಬಸ್ಥರು,ಹಿರಿಯಸ್ತರು ಸೇರಿ ತೀರ್ಮಾನಿಸಿ ನೇಮೋತ್ಸವ ಆಚರಿಸಿ ಕೊಂಡು ಬರುತ್ತಿದ್ದೆವು.

bottom of page