
ಶ್ರೀ ಕರಂಬಡೆ ಶ್ರೀ ಧೂಮಾವತಿ ದೈವಸ್ಥಾನ
,ಕುಳೂರು
ಕಾಸರಗೋಡು ತಾಲೂಕಿನಲ್ಲಿರುವ ಹೊಸಂಗಡಿ ಪ್ರದೇಶದಿಂದ ಸುಮಾರು 8 kmದೂರದಲ್ಲಿರುವ ಮಿಂಜಾ ಗ್ರಾಮ ಪಂಚಾಯತಿನ ಸಂತಡ್ಕದ ಸಮೀಪ ಪೃಥ್ವಿ, ವಾಯು, ತೇಜ, ಅಪ್ಪು, ಆಕಾಶ ಎಂಬ ಪಂಚಭೂತಗಳಿಂದ ನಿರ್ಮಿತವಾದ ಗ್ರಾಮವೇ ಕುಳೂರು, ಸುಂದರ ಬೆಟ್ಟಗುಡ್ಡಗಳು, ನದಿಬಯಲುಗಳು, ಸುಂದರ ಮರಗಿಡಗಳ ಸಾಲುಗಳು ಇವೆಲ್ಲವುಗಳನ್ನು ತನ್ನಲ್ಲಿ ತುಂಬಿಕೊಂಡಿರುವ ಪ್ರಕೃತಿ ಮಾತೆ. ಇಲ್ಲಿ ಪೂರ್ವ ದಿಕ್ಕಿಗೆ ಇರುವ ದೈವಸ್ಥಾನವೇ ಶ್ರೀ ಕರಂಬಡೆ ಧೂಮವತಿ ದೈವಸ್ಥಾನ. ಈ ದೈವಸ್ಥಾನಕ್ಕೆ 400 ವರ್ಷದ ಇತಿಹಾಸ ಇದೆ. ನಂತರ ಕುಳೂರು ಗ್ರಾಮದಲ್ಲಿ ಕರಂಬಡೆ ಧೂಮವತಿ ದೈವವು ಆದಿಶಕ್ತಿಯಾಗಿ ನೆಲೆಗೊಂಡಿತ್ತು. ಇಲ್ಲಿನ ದೈವವು ತನ್ನ ಮಕ್ಕಳನ್ನು ತನ್ನ ಹಚ್ಚ ಹಸಿರಾದ ಮಡಿಲಿನಲ್ಲಿ ಕೂರಿಸಿಕೊಂಡು ಆಸರೆಯನ್ನು ನೀಡುತ್ತಾ ಬಂದಿದ್ದಾಳೆ. ಈ ದೈವಸ್ಥಾನದ ದೈವಗಳೆಂದರೆ ಉಳ್ಳಾಲ್ತಿ ,ಮೈಸಂದಾಯ, ಮೊಟ್ಟ ಎರುಗೋಪಾಲ ಪಿಲಿಚಾಮುಂಡಿ ,ಪಂಜುರ್ಲಿ, ಕರೆಂಬಡೆ ಧೂಮವತಿ ಮತ್ತು ಗುಳಿಗ ದೈವ ಹಾಗೂ ನಮ್ಮಿ ದೈವಸ್ಥಾನದ ವಠಾರದಲ್ಲಿಯೇ ನೆಲೆಯಾದ ಉಳ್ಳಾಲ್ತಿ ಶ್ರೀ ನಾಗಬ್ರಹ್ಮ ಬನ. “ಭಗವಂತನು ಭಕ್ತನಿಂದ ಯಾವ ಪ್ರಾಪಂಚಿಕ ಕಾಣಿಕೆಗಳನ್ನೂ ಬಯಸುವುದಿಲ್ಲ. ಅವನಿಗೆ ಬೇಕಾದುದು ಪರಿಶುದ್ಧ ಪ್ರೇಮದಿಂದ ಕೂಡಿದ ಭಕ್ತನ ಹೃದಯ” ಅದೇ ರೀತಿ ನಮ್ಮಿ ದೈವಸ್ಥಾನದಲ್ಲಿ ಪ್ರತಿ ಎರಡು ವರ್ಷಕ್ಕೊಮ್ಮೆ ನಾಗಬ್ರಹ್ಮ ಸೇವೆ ಮತ್ತು ದೈವ ನೇಮೋತ್ಸವವನ್ನು ಕುಟುಂಬಸ್ಥರೆಲ್ಲರೂ ಸೇರಿ ಭಕ್ತಿಯಿಂದ ಆಚರಿಸುತ್ತಾರೆ. ಇದರ ಜೊತೆಗೆ ದೈವಸ್ಥಾನದಲ್ಲಿ ಪ್ರತಿ ತಿಂಗಳು ಸಂಕ್ರಮಣವನ್ನು ಆಚರಿಸುತ್ತಾರೆ. ಆಟಿ ಸಂಕ್ರಮಣ ಆಚರಿಸಿ ದೈವಗಳನ್ನು ಹೊರಬಿಟ್ಟು ಸೋಣಾ ಸಂಕ್ರಮಣ ಆಚರಿಸಿ ದೈವಗಳನ್ನು ಒಳಸೇರಿಸುವುದು. ನಂತರ ಸೋಣಾ ತಿಂಗಳು ಪೂರ್ತಿ ನಾಲ್ಕು ಹಿರಿಯರು ದೈವಸ್ಥಾನಕ್ಕೆ ಹೋಗಿ ಪ್ರತೀ ದಿನ ದೀಪ ಹಚ್ಚಿಟ್ಟು ಬರುತ್ತಾರೆ. ಇದು ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಂತಹ ರೂಢಿಕೆಯಾಗಿದೆ. ಜನರು ವರ್ಷದ ಕೆಲವು ನಿಶ್ಚಿತ ದಿನಗಳನ್ನು ಹಬ್ಬದ ದಿನಗಳನ್ನಾಗಿ ಆಚರಿಸುತ್ತಿದ್ದರು. ಅದೇ ರೀತಿ ನಮ್ಮಿ ದೈವಸ್ಥಾನದಲ್ಲೂ ಭಕ್ತಿಯಿಂದ ದೇವರನ್ನು ನೆನೆಯಲು ಕೆಲವು ಹಬ್ಬಗಳನ್ನು ಆಚರಿಸಿದ್ದಾರೆ. ನಮ್ಮ ದೈವಸ್ಥಾನದಲ್ಲಿ ನಾಗರ ಪಂಚಮಿ, ಪತ್ತನಾಜೆ, ಕತ್ತಲಿನಿಂದ ಬೆಳಕಿನಡೆಗೆ ಸಾಗುವ ಹಬ್ಬ ದೀಪಾವಳಿ ಮತ್ತು ಎಪ್ರಿಲ್ತಿಂಗಳಲ್ಲಿ ವಿಷ ಕನಿ ಇಟ್ಟು ಹೊಸ ವರ್ಷವನ್ನು ಕುಟುಂಬಸ್ಥರೊಂದಿಗೆ ಆಚರಿಸುತ್ತಾರೆ.