top of page

ನಾಗಬ್ರಹ್ಮ ಕೋಮಾರು ಚಾಮುಂಡೇಶ್ವರಿ ದೈವಸ್ಥಾನ,
ಇಚ್ಚಿಲಂಗೋಡು

'ಕಡಂಬರ್ದ್‌ನಾಯ್' ಕುಟುಂಬದ ದೈವಸ್ಥಾನವಾಗಿರುವ ಇದು ರಾಷ್ಟ್ರೀಯ ಹೆದ್ದಾರಿ 17ರ ಬಂದ್ಯೋಡಲ್ಲಿ ಇಳಿದು ದರ್ಮತಡ್ಕ ಮಾರ್ಗವಾಗಿ ಹೋಗುವ ಅಡ್ಕ ಎಂಬಲ್ಲಿ ಇಳಿದು ಸುಮಾರು 5 ಕಿ.ಮೀ ಮುಂದೆ ಬಯಲ ಪ್ರದೇಶ ಬಂದಾಗ ಕಾಣಸಿಗುವುದೇ ಈ ಕ್ಷೇತ್ರ ಇದು ವಿವಿಧ ಕ್ಷೇತ್ರಗಳ ಸಂಗಮ ಭೂಮಿಯು ಆಗಿದೆ. ಕ್ಷೇತ್ರವು ಎಲ್ಲಾ ಮೂಲಭೂತ ಸೌಕರ್ಯಗಳನ್ನೊಳಗೊಂಡಿದ್ದು, ಮಾತ್ರವಲ್ಲ ಬಾಕುಡ ಸಮುದಾಯದ 18 ದೈವಸ್ಥಾನಗಳಲ್ಲಿ ಈ ದೈವಸ್ಥಾನ ಮಾತ್ರ ಎಂಡೋಮೆಂಟ್ (ದೇವಸ್ವಂ ಬೋಡ್)ಆಗಿದೆ. ಇಲ್ಲಿಂದ ಭಂಡಾರವು ಈಗಲೂ ಕೂಡ ಅಂಬಿಕಂಡ ದೈವಸ್ಥಾನಕ್ಕೆ ಹೋಗುತ್ತದೆ. ಸರ್ವ ಶಕ್ತಿ ಸ್ವರೂಪಿಣಿಯಾದ ಕೋಮಾರ್ಚಾಮುಂಡೇಶ್ವರಿಯು ಧರ್ಮ ಸ್ಥಾಪನೆಗೋಸ್ಕರ 'ಕಲ್ಯಾಣಿ ಮದಿಮಾಳ್' ಎಂಬ ಮಾರು ವೇಷದಲ್ಲಿ ಮೂಲತ ಬದಿಯಡ್ಕ- ನೀರ್ಚಾಲ ಎಣಿಯಾರ್ಪುವಿನಿಂದ ಹಲವು ಪವಾಡಗಳೊಂದಿಗೆ ಇಚ್ಚಿಲಂಗೋಡಿಗೆ ಬಂದು ಮೊತ್ತ ಮೊದಲು ಕೋಮಾರು ಮುಂಡ್ಯ (ಪೀಠ)ದಲ್ಲಿ (ಈಗಿನ ಮೇಲಿನ ಸ್ಥಾನ ಅಥವಾ ಮಿತ್ತ ಬದಿಯಲ್ಲಿ ಈ ಮುಂಡೈವಿದೆ.) ವಿರಾಜಮಾನರಾಗಿ ಸುಮಾರು 101 ಮುಡಿ ಭತ್ತ ಬೆಳೆಯುವ ವಿಶಾಲವಾದ ಬಯಲು ಪ್ರದೇಶವನ್ನು ಪಾವನಗೊಳಿಸಿದರು. ಹಾಗೂ ಇಚ್ಚಲಂಗೋಡು, ಪೇರೂರು, ಕಿದೂರು, ಬಂಬಾಣ ಎಂಬ ನಾಲ್ಕು ಗ್ರಾಮಗಳ ಶಕ್ತಿ ದೇವತೆಯಾಗಿ ಶೋಭಿಸಿದರು. ಮತ್ತು ಬಾಕುಡ ಸಮುದಾಯದ ಕೋಮಾರ ಸಂತತಿ (ಕಡಂಬರ್ದಿನಾಯ)ಯನ್ನು ಕರೆಸಿಕೊಂಡು ಅವರಿಂದ ಪೂಜೆ ಪುರಸ್ಕಾರಗಳನ್ನು ಸ್ವೀಕರಿಸಿಕೊಂಡು ಅವರಿಗೆ ಕುಲದೈವವಾಗಿಯೂ, ಗ್ರಾಮಸ್ಥರಿಗೆ ಗ್ರಾಮ ದೇವತೆ ಅಥವಾ ರಾಜಂದ್ ದೈವವಾಗಿಯೂ, ಲೋಕಕ್ಕೆ ಕೋಮಾರು ಚಾಮುಂಡಿಯಾಗಿಯೂ ರಾರಾಜಿಸಿದರು. ಕೋಮರ ಸಂತತಿಯ 'ಕೋಮರು' ಎಂಬ ವ್ಯಕ್ತಿ ಪೂರ್ವಕಾಲದಲ್ಲಿ ಈ ಗ್ರಾಮದ ಗುರಿಕಾರ (ಯಜಮಾನ)ರಾಗಿದ್ದು, ಸರ್ವಶಕ್ತಳಾದ ಮಾತೆಯನ್ನು ಆರಾದಿಸಿ ಪೂಜಿಸುವಲ್ಲಿ ಮೊದಲಿಗರು ಮತ್ತು ಪ್ರಮುಖರಾಗಿರುವುದರಿಂದ ಕಲ್ಯಾಣಿ ಮದಿಮಾಳ್' ಕೋಮರ್‌ ಚಾಮುಂಡೇಶ್ವರಿಯಾಗಿ ಭಕ್ತರನ್ನು ಹರಸಿದರೆಂದು ಐತಿಹ್ಯ. ಕೋಮರಾಯ ಚಾಮುಂಡೇಶ್ವರಿ ದೈವದ ಮಹತ್ವ ತುಳು ನಾಡಿನ ಮಣ್ಣಿಗೆ ಬಾಕುಡರು ಕೊಟ್ಟ ಕೊಡುಗೆಯು ನಕ್ಷತ್ರಗಳಂತೆ ಎಣಿಸಲು ಸಾದ್ಯಾವಾಗದು. ಅದೇ ರೀತಿ ದೈವರಾಧನೆ ಮತ್ತು ನಾಗಾರಾಧನೆಯ ಆಚರಣೆಯು ಕೂಡ ಅಷ್ಟು ಪ್ರಾಮುಖ್ಯವಾದವುಗಳಾಗಿವೆ. ಕೋಮರಾಯ ಚಾಮುಂಡೇಶ್ವರಿಯು ಶಿವ ಮತ್ತು ಪಾರ್ವತಿಯ ರೂಪದ ಅಂಶವಾಗಿದೆ. ಕೋಮರಾಯ ಎಂಬುದು ಶಿವನಾಗಿಯೂ, ಚಾಮುಂಡೇಶ್ವರಿ ಎಂಬುದು ಪಾರ್ವತಿಯಾಗಿಯೂ ಅವತಾರವಾಗಿದೆ. ವಿಶ್ಲೇಷಣಾರ್ಥವಾಗಿ ಅರ್ಧನಾರೀಶ್ವರ ಎಂಬ ಶಕ್ತಿಯ ಅವತಾರವಾಗಿ, ದೈವದ ರೂಪದಲ್ಲಿ ನಮಗೆ ಆಚರಣೆ ಮತ್ತು ನಂಬಿಕೆಗಳ ಕಾರಣಿಕ ಶಕ್ತಿಯಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ ಕೆಲವೆಡೆ ಇದನ್ನು ಕೋಮರಾಡಿ ಎಂಬುದಾಗಿಯೂ ಕರೆಯುತ್ತಾರೆ. ಇದು ಮೊಗಣೆಗಳಿಗೆ ಒಳಪಟ್ಟ ದೈವವಾಗಿದೆ. ಪೂರ್ವಕಾಲದ 500 ವರ್ಷಗಳಲ್ಲಿ ಜೈನರ ರಾಜಾಡಳಿತದಲ್ಲಿ ಕೃಷಿಕರಾಗಿದ್ದ ಬಾಕುಡರು ಅನಂತರ ಆಂಧ್ರ ಪ್ರದೇಶದಿಂದ ಬಂದು ಬ್ರಾಹ್ಮಣರು, ಇಲ್ಲಿ ನೆಲೆಯೂರಿ ಪೂಜೆ ಕೈಂಕರ್ಯಗಳನ್ನು ಮಾಡುತ್ತಿರುವಾಗ ಅವರಿಗೆ ಸಿಕ್ಕಿದ ದೈವವೇ ಕೋಮರಾಯ ಚಾಮುಂಡಿ ಆಗಿರುತ್ತದೆ. ಈಗ ಕಾಸರಗೋಡು ಜಿಲ್ಲೆಯಲ್ಲಿ ಅದನ್ನು ಎಲ್ಲಾ ಜಾತಿಯವರು ಆರಾಧಿಸುತ್ತಾರೆ.

ಕೋಮರಾಯ ಚಾಮುಂಡಿ ದೈವದ ಹಿನ್ನಲೆ: ಕರ್ನಾಟಕ ಮೈಸೂರು ಅರಮನೆಯಲ್ಲಿ ಶೋಧಿತಳಾಗಿ ಚಾಮುಂಡಿ ಬೆಟ್ಟದಿಂದ ಧರ್ಮರಕ್ಷಣೆಗಾಗಿ ಚಾಮುಂಡೇಶ್ವರಿ ತಾಯಿಯ ಮೂಡುದಿಕ್ಕಿಗೆ ದೈವದ ರೂಪದಲ್ಲಿ ತೆರಳಿ ನಂತರ ದಕ್ಷಿಣ ಭಾಗಕ್ಕೆ ಬಂದು ಬಾಕುಡ ಜಾತಿಯಲ್ಲಿರುವ 'ಕೋಮಾರು' ಎಂಬವರ ಪ್ರತ್ಯಕ್ಷವಾಗಿ ಕೆಲವೆಡೆ ಕೋಮರ್ಚಾಮುಂಡಿಯಾಗಿಯೂ ಇನ್ನು ಕೆಲವೆಡೆ ಕೋಮರಾಯ ಚಾಮುಂಡಿಯಾಗಿಯೂ ಹೆಸರುವಾಸಿಯಾಗುತ್ತಾಳೆ. ದಕ್ಷಿಣ ಕನ್ನಡದ ಕರಿಯ ಬಂಗಾಡಿ ಕಟ್ಟೆಗೆ ಬಂದು ಅಲ್ಲಿ ಸ್ಥಾನ ಕಟ್ಟಿಸಿ ಮಾಕೂರು ಕಟ್ಟೆಗೆ ಬರುತ್ತಾಳೆ. ಕರಿಯ ಬಂಗಾಡಿಕಟ್ಟೆಯ ಬೀಡಿಗೆ ಬಂದು, ಕೆಳಗಿನ ಕರಿಯ ಬಂಗಾಡಿ ಎಂಬವರ ಕಟ್ಟೆಗೆ ಬಂದಾಗ, ಅವರು ಭಜನೆ ಸಂಕೀರ್ತನೆಯಲ್ಲಿ ತೊಡಗಿರುದಾಗ 16 ಭಜನೆಗಳಲ್ಲಿ ಒಂದು ಭಜನೆ ತಪ್ಪಿದುದೆಂದೂ ನಾರಾಯಣ ಮಣಿಯಾನಿಗೆ ಪ್ರತ್ಯಕ್ಷಗೊಂಡು ಅಲ್ಲಿ ತನ್ನ ಸ್ಥಾನಚಾವಡಿ ಕಟ್ಟಿಸಿ ಬಾಡೂರು ದಾರಿಯಾಗಿ ಸೀತಾಂಗೋಳಿಗೆ ಬಂದು, ಹೊಳ್ಳರ ಕದುವಿನಲ್ಲಿ (ಕೊಳ) ವಿರಮಿಸಿ ನಾಲ್ಕಾಪು ದಾರಿಯಾಗಿ ಸಂಚರಿಸಿ ಕೊಡಮೆ ದಾರಿಯಾಗಿ ಅಂಬಿಲಡ್ಕ (ಬಂಬ್ರಾಣ)ಕ್ಕೆಬಂದು ದೈವದಗಳಿಗೆ ಭೇಟಿಕೊಟ್ಟು ನಂತರ ಕುಂಬಳೆ ಆರಿಕ್ಕಾಡಿ ಆಲಿ ಚಾಮುಂಡಿ ಪರಿವಾರ ದೈವಗಳನ್ನು ಭೇಟಿಯಾಗಿ ದೈವಗಳೊಡನೆ ತನಗೆ ಒಂದು ಅಂಗೈ ಸ್ಥಳ ಬೇಕೆಂದು ಕೇಳುತ್ತದೆ. ದೈವಗಳು ಜಾಗ ಕೊಡಲು ನಿರಾಕರಿಸಿದಾಗ, ಕೋಮರಾಯ ದೈವವು 122 ಕುಲಗಳ ಜಾತಿಯ ಹೆಸರನ್ನು ಕೇಳುತ್ತದೆ. ತನ್ನ ಕಾರಣಿಕ ಶಕ್ತಿಯಿಂದ (ಮುಕ್ಕಡೆ ಹೊದ್ದು ಅಂದರೆ (ಒಂದು ಮುಷ್ಟಿ ಹೊದ್ದುಲು, ಎಂದರ್ಥ. ಹೊದ್ದುಲನ್ನು ಕೈಲಿಡಿದು ಆಕಾಶಕ್ಕೆ ಹಾರಿಸಿ ಭೂಮಿಗೆ ಎರಗಿಸಿ ಮಾಯೆಯನ್ನು ದೈವಗಳ ಮುಂದೆ ತೋರುತ್ತದೆ. ಆಲ್ಲಿಂದ ಬಂಬ್ರಾಣ ದಾರಿಯಾಗಿ (ಅಲ್ಲಿ ದೈವದ ಪೀಠವಿದೆ) ನಂತರ ವಿಶ್ರಾಂತಿಯನ್ನು ಪಡೆಯುತ್ತದೆ. ಅಲ್ಲಿ ದೈವವು “ಮದುವೆಗಳ ಕಲ್ಯಾಣಿ ರೂಪದಲ್ಲಿರುತ್ತದೆ. ಬಂಬ್ರಾಣ ಹೊಳೆಯ ದಡಕ್ಕೆ ಬಂದು ದೋಣಿಯ ಪರವನೊಡನೆ “ ನನ್ನನು ಈ ದಡದಿಂದ ಆ ದಡಕ್ಕೆ ಸೇರಿಸು” ಎಂದು ಭಿನ್ನವಿಸಿದಾಗ ಅಂಬಿಗನು ಮದುಮಗಳ ಕಲ್ಯಾಣಿಯ ಸೌಂದರ್ಯ ಮಾರುಹೋಗಿ ಕಾಮಪರವಶನಾದ ನಡು ಮದ್ಯದಲ್ಲಿ ದೋಣಿಯನ್ನು ಮಗುಚಿ ಹಾಕುತ್ತಾಳೆ. ನಂತರ ತನ್ನ ಮಾಯೆಯನ್ನು ತೋರಿ ಮಹಾವಿಷ್ಣುವಿಗೆ “ಪಡಿಚ್ಚಾಲ್ಪಡಿಪ್ಪಿರೆ” ಅಂದರೆ ಮಹಾವಿಷ್ಣು ದೇವಸ್ಥಾನ ಕಟ್ಟಿಸುತ್ತಾಳೆಂದು ವಾಗ್ದಾನ ನೀಡುತ್ತಾಳೆ. ಅಲ್ಲಿಂದ ಇಚ್ಚಂಗೋಡಿಗೆ ಮಹಾಲಿಂಗೇಶ್ವರ ದೇವರ ದರ್ಶನ ಮಾಡಿ, ಬಂಬ್ರಾಣದ ಪ್ರದೇಶದಲ್ಲಿ ಕೋಳಿಕಟ್ಟುವ ಅಂಕ, ಶುರುವಾಗುತ್ತದೆ. ಅಂಕದಲ್ಲಿ ದೂಜಮೂಲ್ಯನು (ಕಳ್ಳಬಾಲ್) ಅಂದರೆ ಕೋಳಿಹುಂಜದ ಕಾಳಿಗೆ ಕಟ್ಟುವ ಸಣ್ಣ ಬಾಲ್)ಕಳ್ಳಬಾಲ್ ಮಾಡಿ ವಂಚಿಸಿದಕ್ಕೆ ಅವನನ್ನು ವಧಿಸಿ ಮೇಲೆ ದೇವರ ಕಟ್ಟೆಯ ಮಾವಿನ ಕಟ್ಟೆಯಲ್ಲಿ ನೆಲೆಯಾಗುತ್ತಾಳೆ. ಅನಂತರ ಬಾಕುಡ ಜನಾಂಗದ ಪಾತ್ರಿಗೆ ದರುಶನ “ನೀಡಿ ಸಂಸಾರವು ನನ್ನನ್ನು ಆರಾಧಿಸಿಕೊಂಡು ಬಂದಲ್ಲಿ ಎಲ್ಲರನ್ನು ಉದ್ಧರಿಸುವೆನೆಂದು ಅಭಯವಿತ್ತು ೧೮ ದೇವಸ್ಥಾನಗಳ ಡೈಕ್ಕಿ ಸರಿಸುಮಾರು ಹೆಚ್ಚು ದೇವಸ್ಥಾನಗಳಲ್ಲಿ ಆರಾಧನೆಯಾಗಿ ನೆಲೆಸುತ್ತಾಳೆ. ಅನಂತರ ಈ ದೈವವು ಉದ್ಯಾವರಕ್ಕೆ ಬಂದು ಆ ಪೇಂದಿನ ಕುಟುಂಬಕ್ಕೆ ಆರಾಧನ ಮೂರ್ತಿಯಾಗುತ್ತಾಳೆ. ಸೀಮೆಯನ್ನು ಉಲ್ಲಂಘನೆ ಮಾಡಿದ ಅರಸು ದೈವಗಳನ್ನು ಕೊರಗಜ್ಜ ದೈವವು ಓಡಿಸಿಕೊಂಡ ದೇರಳಕಟ್ಟೆಯ ಕುತ್ತಾರ್‌ನಿಂದ ಓಡಿಸಿ ಬಂದಾಗ, ಅರಸು ದೈವವು ಕಡಲು ಕಾಯುವ ಬಬ್ಬರ್ಯ ದೈವದೊಡನೆ ಆಶ್ರಯ ಕೇಳಿದಾಗ, ಕೋಮರಾಯ ಚಾಮುಂಡಿಯ ಬಳಿ ಆಶ್ರಯ ಕೇಳಲು ಚಾಮುಂಡಿ ಆಜ್ಞಾಪಿಸುತ್ತದೆ. ಅಲ್ಲಿಂದ ಕೋಮರಾಯ ದೈವವು ಅರಸು ದೈವಗಳಿಗೆ ಉದ್ಯಾವರದ ಮಾಡದ ಮಣ್ಣಿನಲ್ಲಿ ನೆಲೆಯಾಗಿರಿ”ಎಂದು ಅಭಯ ನೀಡುತ್ತದೆ. ಕೊರಗಜ್ಜ ದೈವಕ್ಕೆ ಉದ್ಯಾವರ ಮಂಜೇಶ್ವರದ ವರೆಗೆ ಸೀಮೆಗಡಿದಾಟಬಾರಂದು ವಾಗ್ದಾನ ನೀಡುತ್ತದೆ. ಅಲ್ಲಿಂದ ಸೀಮೆಯಲ್ಲಿ ಕೊರಗಜ್ಜ ದೈವಕ್ಕೆ ಕಟ್ಟಿ ಕೋಲ ಭೋಗ ಇಲ್ಲಿದಾಗುತ್ತದೆ. ಹೀಗೆ ಕೋಮರಾಯ ಚಾಮುಂಡಿಯ ಚರಿತ್ರೆಯು ಮುಂದುವರಿಯುತ್ತದೆ. ಶ್ರೀ ಕೋಮಾರು ಚಾಮುಂಡೇಶ್ವರಿ ದೈವದ ಪ್ರಸಾದ ಅಡ್ಯಾಲ (ಕರಿಮೆಣಸು)ದ ಹಿನ್ನಲೆ : ಊರಿನ ರೋಗ-ರುಜಿನಗಳನ್ನು ದೂರಮಾಡಿ ಸರ್ವಶಕ್ತಿಯಾಗಿ ಮೆರೆಯುತ್ತಿರುವ ಮಾತೆ ಮಾರಿದೇವಿ ಮತ್ತು ಕೋಮಾರು ಚಾಮುಂಡೇಶ್ವರಿಯು ಮಾಯರೂಪದಲ್ಲಿ ಬೇಟಿಯಾಗಿ ಪರಸ್ಪರ ಕುಶಲೋಪಚಾರವನ್ನು ವಿನಿಮಯಮಾಡಿಕೊಂಡು ನಂತರ, ನಮ್ಮನ್ನು ಆರಾಧಿಸುವ ಭಕ್ತ ಜನ ಸಮೂಹಕ್ಕೆ ನಾವಿಬ್ಬರು ಏಕಾರೂಪದಲ್ಲಿ ಸಿಗಬೇಕೆಂದು ಅವರು ತೀರ್ಮಾನಿಸಿದರೆಂದು ಐತಿಹ್ಯ. ಈ ರೀತಿಯಲ್ಲಿ ಭಕ್ತರಿಗೆ ಬರುವ ರೋಗ-ರುಜಿನಗಳನ್ನು, ಕಷ್ಟ, ಕಾರ್ಪಣ್ಯಗಳ ಮಾರಿಯನ್ನು ಕಳೆಯಲು ಮಾರಿಯನ್ನು ಮತ್ತು ತಮ್ಮನ್ನು ಆರಾಧಿಸುವ ಭಕ್ತ ಸಮೂಹಕ್ಕೆ ಸದಾ ತಂಪಿನ ಸಿಂಚನವಾಗಲು ಕೋಮಾರು ಚಾಮುಂಡೇಶ್ವರಿಯು ಕರಿಮೆಣಸಿನಲ್ಲಿ (ಅಡ್ಯಾಲ) ಇಬ್ಬರು ಐಕ್ಯರಾಗಿ ಪ್ರಸಾದ ರೂಪದಲ್ಲಿ ಪ್ರಾಪ್ತಿಯಾದರು. ಅಂದರೆ ಕರಿಮೆಣಸು ಜಗಿದಾಗ ಖಾರವಾಗುತ್ತದೆ. ಆದರೆ ಅದು ಶರೀರಕ್ಕೆ ತಂಪಾಗಿರುತ್ತದೆ. ಆದುದರಿಂದ 'ಅಡ್ಯಾಲ' ಎಂಬ ಹೆಸರಿನಿಂದ ಪ್ರಸಾದ ರೂಪವಾಗಿ ಲಬಿಸಿತು. ಇದು ಮಾರಿದೇವಿ ಮತ್ತು ಕೋಮಾರು ಚಾಮುಂಡೇಶ್ವರಿಯ ಐಕ್ಯತೆಯ ಸಂದೇಶವೂ ಆಗಿರುತ್ತದೆ. ಜೊತೆಗೆ ಅರಸಿನ ಹುಡಿಯನ್ನು ತಿಲಕವಿಟ್ಟರೆ. ಶಕ್ತಿ ಸ್ವರೂಪಿಯಾಗಿರುವ ಮಾತೆಯ ಅನುಗ್ರಹ ಭಕ್ತರಿಗೆ ಲಭಿಸುವುದು

bottom of page