
ಕುಂಬಳೆ ಶ್ರೀ ಧೂಮಾವತಿ ದೈವಸ್ಥಾನ, ಆರಿಕ್ಕಾಡಿ
ಕಾಸರಗೋಡು - ಮಂಗಳೂರು ರಾಷ್ಟ್ರೀಯ ಹೆದ್ದಾರಿ 17 ರ ಆರಿಕ್ಕಾಡಿಯಿಂದ ಪೂರ್ವಕ್ಕೆ 3 ಕಿ.ಮೀ ದೂರದಲ್ಲಿ ಪ್ರಕೃತಿ ರಮಣೀಯಾವಾದ ತಗ್ಗು ಪ್ರದೇಶದಲ್ಲಿ ನೆಲೆಗೊಂಡಿರುವ ಇತಿಹಾಸ ಪ್ರಸಿದ ಕುಂಬಳೆ ಸೀಮೆಯ ಆರಿಕ್ಕಾಡಿ ಗ್ರಾಮದಲ್ಲಿ ಆಸ್ತಿಕ ಬಂಧುಗಳ ಶ್ರದ್ಧೆಯ ಕೇಂದ್ರವಾಗಿ ಕುಂಬಳೆ ಶ್ರೀ ಧೂಮವತೀ ದೈವಸ್ಥಾನವು ನೆಲೆಗೊಂಡಿದೆ. ಈ ದೈವಸ್ಥಾನವು (ಎಲ್ಯ ಕಿನ್ಯಂದಿನಾಯ) ಕುಟುಂಬಸ್ಥರ ಹಿರಿಯರ ಸಾತ್ವಿಕ ಭಕ್ತಿಗೆ ಒಲಿದ ಅದ್ವೀತಿಯಾ ಮಹಿಮಾನ್ವಿತ ಕಾರಣಿಕ ಶಕ್ತಿಯಾದ ಶ್ರೀ ಧೂಮವತೀ ಧೈವವು ಇಲ್ಲಿ ಅಧಿದೇವತೆಯಾಗಿದೆ .ಈ ಕ್ಷೇತ್ರದಲ್ಲಿ ನಾಗ, ಉಳ್ಳಾಲ್ತಿ, ಮೈಸಂದಾಯ, ಪೊಟ್ಟಲ್ಲಾಯ, ಎರುಗೋಪಾಲ, ಪಿಲಿಚಾಮುಂಡಿ, ಅಣ್ಣಪ್ಪ ಪಂಜುರ್ಲಿ, ಬಂಟ, ಕೊರತಿ, ದೈವಗಳ ಸಾನಿದ್ಯವೂ ಇಲ್ಲಿ ಪ್ರನೀತವಾಗಿದೆ. ಸುಮಾರು 600 ವರುಷಗಳಿಂದ ಇರುವಂತೆ ದಾಖಲೆ ಹೇಳುವ ಪ್ರಕಾರ ಪುರಾತನವಾದುದು. ಶ್ರೀ ಕ್ಷೇತ್ರದ ತಂತ್ರಿ ವರ್ಯರಾದ ಬ್ರಹ್ಮಶ್ರೀ ವೇದ ಮೂರ್ತಿ ಶ್ರೀ ನಾರಾಯಣ ದೇವ ಪೂಜಿತ್ತಾಯ ಆರಿಕ್ಕಾಡಿ ಇವರ ನೇತೃತ್ವದಲ್ಲಿ ಕುಟುಂಬದ ಹಿರಿಯವರು, ಸಮಿತಿ ಸದಸ್ಯರು ಹಾಗೂ ಕುಟುಂಬಸ್ಸಾರು ಸೇರಿ ವರ್ಷ ಪ್ರತಿಮಾರ್ಚ್ ತಿಂಗಳು (ಸಂಕ್ರಮಣ ಸೇರಿ 7 ರಲ್ಲಿ 8 ರಲ್ಲಿ ವಿವಿಧ ವೈದಿಕ, ಧಾರ್ಮಿಕ ಸಂಸ್ಕೃತಿಕ, ಕಾರ್ಯಕ್ರಮಗಳೊಂದಿಗೆ ವರ್ಷಾವಧಿ ಉತ್ಸವವು ಬಹು ವಿಜೃಂಭಣೆಯಿಂದ ಜರಗುತ್ತದೆ. ಪ್ರತಿ ತಿಂಗಳು ಸಂಕ್ರಮಣಕ್ಕೆ ಮತ್ತು ಪ್ರತಿ ಪರ್ವಕ್ಕೂ ದೈವಸ್ಥಾನದಲ್ಲಿ ವಿಶೇಷ ಸೇವೆಯ ಜರಗುವುದು.
ವಾಡಿಕೆಯಂತೆ ಅನಾದಿ ಕಾಲದಿಂದಲೂ ವಾರ್ಷಿಕ ನೇಮೋತ್ಸವಕ್ಕೆ ದೈವಸ್ಥಾನದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಿಂದ ಭಂಡಾರ ಬರುವುದು ರೂಢಿ.