
About BSSS(R)
ಬಾಕುಡ ಸಮಾಜ ಸೇವಾ ಸಮಿತಿಯು (ರೀ.) ಭೂಮಿಪುತ್ರರಾದ ಬಾಕುಡ ಸಮುದಾಯದ ಕೇಂದ್ರ ಕಾರ್ಯಕಾರಿ ಸಮಿತಿಯಾಗಿದೆ. ಹಿಂದಿನ ಕಾಲದಿಂದಲೇ ಸಮುದಾಯದ ಒಳಿತಿಗೆ ಸಮಾಜದ ಉದ್ಧಾರಕ್ಕೆ ಪರಿಶ್ರಮಿಸುತ್ತಿದೆ. ಸಮಾಜದ ಒಗ್ಗಟ್ಟಿಗೆ ನಾನಾರೀತಿಯ ಸಾಂಸ್ಕೃತಿಕ, ಕ್ರೀಡಾ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ಕರ್ನಾಟಕ -ಕೇರಳ ಇದರ ಹುಟ್ಟು 1988 – 89ರಲ್ಲಿ ಮಂಗಳೂರಿನಲ್ಲಿ ಸಮಾಜದ ಸಮಾವೇಶವನ್ನು ಏರ್ಪಡಿಸಿ ಅದರಲ್ಲಿ ಈ ನಿರ್ಣಯವನ್ನು ತೆಗೆದು ಕೊಳ್ಳಲಾಗಿತ್ತು.
1. ಸಮಾಜದ ಹೆಸರು ನೋಂದಾವಣಿ,
ಮಂಗಳೂರಿನ ರಿಜಿಸ್ಟಾರ್ ಆಫೀಸಿನಲ್ಲಿ ಸಮಾಜದ ಹೆಸರನ್ನು “ಬಾಕುಡ ಸಮಾಜ ಸೇವಾ ಸಮಿತಿ(ರಿ) ಎಂದು ನೋಂದಾಯಿಸಲಾಗಿದೆ. ನೋಂದಣಿ ಸಂಖ್ಯೆ 88/89.
2. ಸಮಾಜದ ಏಳಿಗೆಗೆ, ಸಮಾಜ ಸೇವೆ ಮಾಡುವುದು ಅತೀ ಅಗತ್ಯ ಎಂದು ಭಾವಿಸಿ ಸೇರಿದ ಎಲ್ಲಾ ಉದ್ಯೋಕ್ಷ ಸದಸ್ಯರ ಅಭಿಪ್ರಾಯವಾಗಿರುವುದರಿಂದ, ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಕೊಟ್ಟು, ಪ್ರಥಮವಾಗಿ ಈ ಸಂಘದಿಂದ ಕೈಗೊಂಡ ಕೆಲಸವೆಂದರೆ, ಸಮಾಜ ಬಾಂಧವರ ಮನೆಮನೆಗೆ ತೆರಳಿ (ಮಂಗಳೂರಿನಿಂದ ಕಾಸರಗೋಡಿನವರೆಗೆ) ಒಂದನೇತರಗತಿಯಿಂದ 10 ನೇ ತರಗತಿಯವರೆಗೆ ಕಲಿಯುತ್ತಿರುವ ಮಕ್ಕಳಿಗೆ ಪುಸ್ತಕವನ್ನು ವಿತರಿಸಿ, ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಿರುತ್ತೇವೆ. ಹೀಗೆ ಕೆಲವು ವರ್ಷಗಳ ವರೆಗೆ ಈ ಕಾಠ್ಯಕ್ರಮವನ್ನು ನಡೆಸಿಕೊಂಡು ಬಂದಿದೆ
Executive Members
Executive member 2022