
Bhoomi Puthrer.. Baila Bakuder!
ಬೈಲ ಬಾಕುಡೆರ್
ಭೂಮಿ ಪುತ್ರೆರ್
Welcome to
Bakuda Samaja Seva Samithi.
ಬಾಕುಡ ಸಮಾಜ ಸೇವಾ ಸಮಿತಿಗೆ ಸ್ವಾಗತ
ಪವಿತ್ರವಾದ ಹಿಂದೂ ಧರ್ಮದಲ್ಲಿ ಹಲವು ಜಾತಿ ಪಂಗಡಗಳಿವೆ. ಅದರಲ್ಲಿ ಪರಿಶಿಷ್ಟ ಜಾತಿಗೆ ಸೇರಲ್ಪಡುವ "ಬಾಕುಡ" ಎಂಬ ಸಮುದಾಯ ಒಂದಾಗಿದೆ. ಕೇರಳ ರಾಜ್ಯದ ಗಡಿಪ್ರದೇಶವಾದ ಕಾಸರಗೋಡು, ವಯನಾಡು ಜಿಲ್ಲೆ, ಕರ್ನಾಟಕ ರಾಜ್ಯದ ಗಡಿಪ್ರದೇಶವಾದ ದಕ್ಷಿಣಕನ್ನಡ, ಉಡುಪಿ, ಮೈಸೂರು, ಚಿಕ್ಕಮಗಳೂರು, ಕೊಡಗು ಇತ್ಯಾದಿ ಕಡೆಗಳಲ್ಲಿ ಹೆಚ್ಚಾಗಿ ಬಹುಸಂಖ್ಯಾತರಾಗಿದ್ದು ತುಳುನಾಡಿನ ಮೂಲನಿವಾಸಿಗಳಲ್ಲಿ ಬಾಕುಡ ಸಮುದಾಯದವರು "ಭೂಮಿಪುತ್ರರು" ಎಂದು ಬಿಂಬಿತರಾಗಿದ್ದಾರೆ.
ತುಳುನಾಡಿನ ದೈವರಾಧನೆ ಮತ್ತು ನಾಗರಾಧನೆಯನ್ನು ಬಹಳ ಭಕ್ತಿ, ಶ್ರದ್ಧೆಯಿಂದ ಆಚರಿಸುವ ಹಲವು ಸಮುದಾಯಗಳಲ್ಲಿ ಬಾಕುಡ ಸಮುದಾಯದವರು ಪ್ರಮುಖರು. ಅದರಲ್ಲೂ "ನಾಗರಾಧನೆ" ಎಂಬುದು ಪ್ರಾಚೀನ ಕಾಲದ ಆರಾಧನಾ ಸಂಸ್ಕೃತಿಯಾಗಿದೆ. ತುಳುನಾಡಿನ ಮಣ್ಣಿನ ಹಕ್ಕುದಾರರಾದ ಬಾಕುಡರು ನಾಗರಾಧಕರು. "ನಾಗ" ಬಾಕುಡ ಸಮುದಾಯದ ಕುಲದೈವವಾಗಿದೆ. ನಾಗಬನದಲ್ಲಿ ನಾಗಸೇವೆ ಆರಾಧನೆ ಮಾಡಿ ತನು ಎರೆಯುವ ಸಮುದಾಯವೆಂದರೆ ಬಾಕುಡರು ಮಾತ್ರ. ನಾಗರಾಧನೆಯ ಮೂಲ ಜನಾಂಗವೇ ಬಾಕುಡರು. ನಾಗದೇವರಿಗೆ ಕೋಲಕೊಟ್ಟು ಆರಾಧನೆ ಮಾಡುವ ಏಕೈಕ ಸಮುದಾಯವರೆಂದರೆ, ಬಾಕುಡರು. ಮತ್ತು ನಾಗಕೋಲವನ್ನು "ಬಿರ್ಮೆರೆ ನಲಿಕೆ" ಎಂದು ತುಳುವಿನಲ್ಲಿ ಹೇಳುತ್ತಾರೆ.
